Job Description: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಸರ್ಕಾರದಲ್ಲಿ ಭಾರತೀಯ ಮೂಲದ ವೇದಾಂತ್ ಪಟೇಲ್ ಅವರನ್ನು ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಪಟೇಲ್ ಅವರು ಬೈಡನ್ ಅವರ ಹಿರಿಯ ವಕ್ತಾರರಾಗಿ ಸೇವೆಸಲ್ಲಿಸುತ್ತಿದ್ದರು. ವೇದಾಂತ್ ಪಟೇಲ್ ಅವರು ಭಾರತದಲ್ಲಿ ಜನಿಸಿ ಕ್ಯಾಲಿಫೋರ್ನಿಯಾ-ರಿವರ್ಸೈಡ್ ಹಾಗೂ ಫ್ಲೋರಿಡಾ ಯುನಿವರ್ಸಿಟಿಯ ಪದವಿಯನ್ನು ಪಡೆದುಕೊಂಡಿದ್ದು, ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ಪಾಶ್ಚಿಮಾತ್ಯ ಪ್ರಾದೇಶಿಕ ಪತ್ರಿಕಾ ಕಾರ್ಯದರ್ಶಿಯಾಗಿ ಹಾಗೂ ಕಾಂಗ್ರೆಸ್ ಸದಸ್ಯ ಮೈಕ್ ಹೋಂಡಾಗೆ ಸಂವಹನ ನಿರ್ದೇಶಕರಾಗಿ ಕೆಲಸ ಮಾಡಿ, ಪ್ರಸ್ತುತ ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕ ಗೊಂಡಿದ್ದಾರೆ.