Job Description: ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಹಸುವಿನ ಸಗಣಿಯಿಂದ ತಯಾರಿಸಲಾಗುತ್ತಿರುವ "ವೇದಿಕ್ ಪೇಂಟ್" ಬಿಡುಗಡೆಯಾಗುವುದಾಗಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ. ರೈತರಿಗೆ ವರ್ಷಕ್ಕೆ ಹೆಚ್ಚುವರಿ 55 ಸಾವಿರ ರೂ. ಈ ವೇದಿಕ ಪೈಂಟ್ ನಿಂದ ಲಾಭ ದೊರೆಯುವುದಾಗಿ ಅವರು ಮಾಹಿತಿ ನೀಡಿದ್ದು, ಜೊತೆಗೆ ಖಾದಿ ಗ್ರಾಮೋದ್ಯೋಗ ಮಂಡಳಿಯ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ರೈತರಿಗೆ ಹೆಚ್ಚಿನ ಲಾಭವನ್ನು ದೊರಕಿಸಿಕೊಡಲು ಈ ವೇದಿಕೆ ಪೈಂಟ್ ಅನ್ನು ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ. ಈ ವೇದಿಕ್ ಪೈಂಟ್ ಡಿಸ್ಟೆಂಪರ್ ಮತ್ತು ಎಮಲ್ಶನ್ ರೂಪದಲ್ಲಿ ದೊರೆಯಲಿದೆ.