Job Description: 2020ರ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಇತ್ತೀಚಿಗೆ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಬಿಡುಗಡೆಮಾಡಿದ್ದು, ಈ ಪಟ್ಟಿಯಲ್ಲಿ ಒಟ್ಟು 189 ದೇಶಗಳ ಪೈಕಿ ಭಾರತವು 131ನೇ ಸ್ಥಾನ ಪಡೆದುಕೊಂಡಿದೆ. ದೇಶದ ಶಿಕ್ಷಣ, ಆರೋಗ್ಯ ಮತ್ತು ಜೀವನ ಗುಣಮಟ್ಟದ ಆದರಿಸಿ ಈ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗುತ್ತದೆ. 2018ಗೆ ಹೋಲಿಸಿದಾಗ ಎರಡು ಸ್ಥಾನಗಳಷ್ಟು ಕೆಳಕ್ಕೆ ಕುಸಿತ ಕಂಡಿದೆ. ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ಬಿಡುಗಡೆ ಮಾಡಿರುವ ಈ ಸೂಚ್ಯಂಕದಲ್ಲಿ ನಾರ್ವೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನಗಳು ಐಯಲ್ರ್ಯಾಂಡ್, ಸ್ವಿಝಲ್ರ್ಯಾಂಡ್, ಹಾಂಕಾಂಗ್ ಮತ್ತು ಐಸ್ ಲ್ಯಾಂಡ್ಗೆ ಪಡೆದುಕೊಂಡಿವೆ.