Job Description: ಭಾರತ ಸರ್ಕಾರವು ₹28 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನೂ ಭೂಸೇನೆ ಹಾಗೂ ವಾಯುಪಡೆ, ನೌಕಾಪಡೆಗಾಗಿ ದೇಶೀಯ ಕೈಗಾರಿಕೆಗಳಿಂದಲೇ ಖರೀದಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡಲು ₹28 ಸಾವಿರ ಕೋಟಿ ಮೌಲ್ಯದ ಉಪಕರಣಗಳನ್ನು ದೇಶಿ ಸಂಸ್ಥೆಗಳಿಂದಲೇ ಖರೀದಿಸುವ "ಅಸೆಪ್ಟೆನ್ಸ್ ಆಫ್ ನೆಸೆಸ್ಸಿಟಿ"ಗೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ತಿಳಿಸಿದ್ದಾರೆ. ಇದರಲ್ಲಿ DRDO ವಿನ್ಯಾಸಗೊಳಿಸಿದ 'ಏರ್ಬಾರ್ನ್ ಅರ್ಲಿ ವಾರ್ನಿಂಗ್ ಆಯಂಡ್ ಕಂಟ್ರೋಲ್ ಸಿಸ್ಟಂ' ಭಾರತೀಯ ನೌಕಾಪಡೆಗಾಗಿ ಅತ್ಯಾಧುನಿಕ ಗಸ್ತು ಹಡಗು ಹಾಗೂ ಭೂಸೇನೆಗಾಗಿ ಮಾಡ್ಯುಲಾರ್ ಬ್ರಿಜ್ ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.