Job Description: ಭಾರತ ಸರ್ಕಾರವು ನೇತಾಜಿಯ 125 ನೇ ಜನ್ಮದಿನದಂದು 2022 ರ ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯವನ್ನು ಕೋಲ್ಕತ್ತಾ ನಗರದಲ್ಲಿ ತೆರೆಯಲಿದೆ. ಜೊತೆಗೆ ಭಾರತ ಸರ್ಕಾರವು ನೇತಾಜಿ ಬರೆದ ಕೆಲವು ಪುಸ್ತಕಗಳನ್ನು ಮರುಮುದ್ರಣ ಮಾಡುವ ಯೋಜನೆ ಕೈಗೊಂಡಿದೆ. ನವದೆಹಲಿಯಲ್ಲಿರುವ ವಸ್ತುಸಂಗ್ರಹಾಲಯವನ್ನು ಡಿಜಿಟಲೀಕರಣಗೊಳಿಸಲಾಗಿದೆ ಕೆಂಪು ಕೋಟೆಯಲ್ಲಿ ಸುಭಾಷ್ ಚಂದ್ರ ಬೋಸ್ ರವರ ಮ್ಯೂಸಿಯಂನಲ್ಲಿ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ, 1857 ರ ದಂಗೆ ಮತ್ತು ಸಮಕಾಲೀನ ವರ್ಣಚಿತ್ರಗಳಿರುತ್ತವೆ. ಇದನ್ನು ಹೊರತುಪಡಿಸಿ ಇನ್ನೂ ಮೂರು ವಸ್ತು ಸಂಗ್ರಹಾಲಯಗಳು ಸ್ಥಾಪಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.