Job Description: ಗೂಗಲ್ನ ಅಂಗಸಂಸ್ಥೆಯಾದ ಪ್ರಾಜೆಕ್ಟ್ ಲೂನ್ ಇತ್ತೀಚೆಗೆ ಆಕಾಶಬುಟ್ಟಿಗಳು ವಾಯುಮಂಡಲದಲ್ಲಿ ಸುಮಾರು 1 ವರ್ಷಗಳ ಕಾಲ ಯಶಸ್ವಿಯಾಗಿ ಉಳಿದಿದ್ದು, ವಿಶ್ವದ ದೂರದ ಭಾಗಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಪ್ರಾಜೆಕ್ಟ್ ಲೂನ್ ಹೊಂದಿದೆ. * 2.1 ಲಕ್ಷ ಕಿಲೋ ಮೀಟರ್ ದೂರವನ್ನು ಈ ಹೀಲಿಯಂ ಆಕಾಶಬುಟ್ಟಿಗಳು ಒಳಗೊಂಡಿರುತ್ತವೆ. * ಈ ಆಕಾಶಬುಟ್ಟಿಗಳು 15 ಮೀಟರ್ ಅಗಲ ಮತ್ತು 12 ಮೀಟರ್ ಎತ್ತರವನ್ನು ಹೊಂದಿದ್ದು, ಇವುಗಳು ಭೂಮಿಯಿಂದ 20 ಕಿ.ಮೀ ಎತ್ತರದಲ್ಲಿ ಉಡಾವಣೆಗೊಳ್ಳುತ್ತವೆ. * ಲೂನ್ 312 ದಿನಗಳ ಕಾಲ ಗಾಳಿಯಲ್ಲಿ ಉಳಿಯುವ ಮೂಲಕ ವಾಯುಮಂಡಲ ಹಾರಾಟದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿವೆ. ಆಕಾಶಬುಟ್ಟಿಗಳು ಸೌರ ಫಲಕಗಳಿಂದ ನಿಯಂತ್ರಿಸಲ್ಪಡುತ್ತವೆ, ಬಲೂನ್ನಲ್ಲಿನ ಫಲಕಗಳು ಸೂರ್ಯನ ಕಡೆ ಒಲೆಕೊಂಡಾಗ 100 ವ್ಯಾಟ್ ಶಕ್ತಿಯನ್ನು ಉತ್ಪಾದನೆಮಾಡುತ್ತವೆ.