Job Description: ಭಾರತದ ಮೊದಲ ಹಿಂದ್ ಕೇಸರಿ ಎಂದೇ ಪ್ರಖ್ಯಾತರಾದ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಪೈಲ್ವಾನರಾದ ಶ್ರೀಪತಿ ಶಂಕರ ಖಂಚನಾಳೆರವರು ತಮ್ಮ 86 ನೇ ವಯಸ್ಸಿನಲ್ಲಿ ಸೋಮವಾರ ನಿಧನರಾದರು. * ಇವರು 1959ರಲ್ಲಿ ದೆಹಲಿಯ ನ್ಯೂ ರೈಲ್ವೆ ಸ್ಟೇಡಿಯಂನಲ್ಲಿ ನಡೆದ ಕುಸ್ತಿಯಲ್ಲಿ ಆಟದಲ್ಲಿ ಪಂಜಾಬನ ಪೈಲ್ವಾನ್ ರುಸ್ತಮ-ಎ-ಪಂಜಾಬ್ ಬತ್ತಾಶಿಂಗ್ರನ್ನು ಸೋಲಿಸಿ ಹಿಂದ ಕೇಸರಿ ಎಂದೇ ಪ್ರಖ್ಯಾತಿ ಪಡೆದಿದ್ದರು. ಆಗ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದರು ಖಂಚನಾಳೆಯವರಿಗೆ ಹಿಂದ ಕೇಸರಿ ಪ್ರಶಸ್ತಿ ನೀಡಿ ಅವರಿಗೆ ಸನ್ಮಾನಿಸಿದ್ದರು. * ಇವರು ಗುರುಗಳು ಶ್ರೀಪತಿ ಹಿರುಕುಡೆ, ಇವರಿಗೆ ಕರ್ನಾಟಕ ಸರಕಾರ ಕರ್ನಾಟಕ ಭೂಷಣ ಮತ್ತು ಮಹಾರಾಷ್ಟ್ರ ಸರಕಾರ ಶಿವ ಛತ್ರಪತಿ ಪ್ರಶಸ್ತಿಗಳು ಸಂದಿವೆ. * ಇವರು ರಾಷ್ಟ್ರೀಯ ತಾಲಿಮ (ಗರಡಿ ಮನೆ) ಸಂಘದ ಅಧ್ಯಕ್ಷರಾಗಿಯು ಸಹ ಕಾರ್ಯವನ್ನು ನಿರ್ವಹಿಸಿದ್ದಾರೆ.