Job Description: ಇತ್ತೀಚಿಗೆ ಕರ್ನಾಟಕ ಸರ್ಕಾರದಿಂದ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ. ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಬಳಸದಿದ್ದಲ್ಲಿ 5,500 ರೂಪಾಯಿ ದಂಡ ವಿಧಿಸಲಾಗುವದು. 2 ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟ್ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಲು ಆದೇಶವನ್ನ ನೀಡಲಾಗಿತ್ತು ಇನ್ನು ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಜೋಡಿಸಲು ಪೊಲೀಸರು ಕೆಲವು ಸಮಯಾವಕಾಶ ನೀಡಿದ್ದಾರೆ. ಬೆಂಗಳೂರು ಜೊತೆಗೆ ಕರ್ನಾಟಕ ಸೇರಿದಂತೆ ಶೀಘ್ರದಲ್ಲಿಯೇ ಎಲ್ಲಾ ಪ್ರದೇಶಗಳಲ್ಲಿ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಲಿದೆ ಎಂದು ತಿಳಿಸಲಾಗಿದೆ.