Job Description: ಭಾರತೀಯ ಅಂಚೆ ಇಲಾಖೆಯಿಂದ 'DakPay' ಎಂಬ ಹೊಸ ಡಿಜಿಟಲ್ ಪಾವತಿ ಅಪ್ಲಿಕೇಷನ್ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ಆರಂಭಮಾಡಲಾಗಿದೆ. ಗ್ರಾಹಕರಿಗೆ ಆನ್ ಲೈನ್ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಈ ಅಪ್ಲಿಕೇಷನ್ ಒದಗಿಸಿಕೊಡುತ್ತದೆ. ಇದು ಇತರ ಯಾವುದೇ ಬ್ಯಾಂಕ್ ಜತೆಗೆ ಕೂಡ ಬ್ಯಾಂಕಿಂಗ್ ಸೇವೆಯನ್ನು ಬಳಸಬಹುದಾಗಿದೆ. ಯುಪಿಐ ಆಧಾರಿತ ಡಿಜಿಟಲ್ ಪಾವತಿ ಅಪ್ಲಿಕೇಷನ್ ಇದಾಗಿದ್ದು, ಇದರಿಂದ ಹಣ ವರ್ಗಾವಣೆ ಮತ್ತು ವಿವಿಧ ಪೋಸ್ಟಲ್ ಸೇವೆಗಳಿಗೆ ಇದು ತುಂಬಾ ಅನುಕೂಲಕರವಾಗಲಿದೆ ಎಂದು ಅಂಚೆ ಇಲಾಖೆ ಡಾಕ್ ಪೇ ಆರಂಭಿಸಿದೆ. ಇದು ಪ್ರಧಾನಿ ಮೋದಿ ಹೇಳಿರುವ ಆತ್ಮನಿರ್ಭರ್ ಭಾರತಕ್ಕೆ ಬಹಳ ಉಪಯುಕ್ತವಾಗಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿಯನ್ನು ನೀಡಿದ್ದಾರೆ.