Job Description: ಯಾವುದೇ ಬ್ರೈಲ್ ಲಿಪಿಯ ಸಹಾಯ ಇಲ್ಲದೆ ವಿದ್ಯಾರ್ಥಿ ಎಚ್.ಎನ್ ಮನು ಕುಮಾರ್ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಮೀಪದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ದಿವ್ಯಾಂಗ ವಿದ್ಯಾರ್ಥಿ ಬ್ರೈಲ್ ಲಿಪಿ ಬಳಸದೆ ಸ್ಕ್ರೈಬ್ ಗಳನ್ನು ಬಳಸಿಕೊಂಡು ಮಹಾ ಪ್ರಬಂಧವೊಂದನ್ನು ಮಂಡಿಸಿದ್ದು, ಇದರಿಂದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆಯುವ ಮೂಲಕ ಎಚ್.ಎನ್ ಮನು ಕುಮಾರ್ ಸಾಧನೆ ಮಾಡಿದ್ದಾನೆ. 2016ರಲ್ಲಿ ಕೆ-ಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಇವರು ರಾಜ್ಯಶಾಸ್ತ್ರ ವಿಷಯದಲ್ಲಿ 'ಡಾ.ಆರ್.ಎನ್ ದಿನೇಶ್' ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಜಿಲ್ಲೆಯ ಅಂಧ ವಿದ್ಯಾರ್ಥಿಗಳ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಧೆಗಳ ಪಾತ್ರ ಎಂಬ ಮಹಾಪ್ರಬಂಧವನ್ನು 3 ವರ್ಷಗಳ ಕಾಲ 105 ಶಾಲೆಯ 354ಕ್ಕೂ ಹೆಚ್ಚು ಮಕ್ಕಳನ್ನು ಸ್ವತಃ ತಾವೇ ಸಂದರ್ಶಿಸಿ ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.