Job Description: ಭಾರತೀಯ ನೌಕಾಪಡೆ ಇದೀಗ 38 ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಪಡೆದುಕೊಳ್ಳುವ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ. ನಿರ್ಮಾಣ ಹಂತದಲ್ಲಿರುವ ವಿಶಾಖಪಟ್ಟಣಂ ಯುದ್ಧನೌಕೆಗಳಲ್ಲಿ ಈ ಕ್ಷಿಪಣಿಗಳನ್ನು ಅಳವಡಿಸಲಾಗುವುದು ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಭಾರತೀಯ ನೌಕಾಪಡೆಯು 1800 ಕೋಟಿ ರೂ. ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯದ ಮುಂದೆ ಇಡಲಾಗಿದೆ, ಇದು ಅತಿ ಶೀಘ್ರದಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ ಎಂದು ಸರ್ಕಾರ ತಿಳಿಸಿದೆ, 450 ಕಿ.ಮೀ. ವೇಗದಲ್ಲಿ ಚಲಿಸಿ ಗುರಿ ತಲುಪಿ ವೈರಿ ಪಡೆಯನ್ನು ನಾಶಗೊಳಿಸುವ ಶಕ್ತಿಯನ್ನು ಬ್ರಹ್ಮೋಸ್ ಕ್ಷಿಪಣಿ ಹೊಂದಿದೆ.