Job Description: ಭಾರತದ ಚುನಾವಣಾ ಆಯೋಗವು ನೂತನವಾಗಿ ಡಿಜಿಟಲ್ ಮತದಾರರ ಗುರುತಿನ ಚೀಟಿಯು (EPIC) ಎಲೆಕ್ಟ್ರಾನಿಕ್ ರೂಪ ಪಡೆದುಕೊಳ್ಳಲಿದೆ. ಈ ಡಿಜಿಟಲ್ ಕಾರ್ಡ್ ಕ್ಯೂಆರ್ ಕೋಡ್ ನ್ನು ಹೊಂದಿರಲಿದ್ದು, ಇದನ್ನು ಸ್ಕ್ಯಾನ್ ಮಾಡುವ ಮೂಲಕ ಮತದಾರನ ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕದಂತಹ ಹಲವು ಮಾಹಿತಿಯನ್ನು ತಿಳಿಯಬಹುದಾಗಿದೆ. 2021ರ ಬೇಸಿಗೆಯ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ಇದು ಬಳಕೆಗೆ ತರಲಿದ್ದು ಇದನ್ನು ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯಂತಹ ರಾಜ್ಯಗಳಲ್ಲಿ ಬಳಕೆಗೆ ತರಲು ಸರ್ಕಾರ ನಿರ್ಧಾರವನ್ನು ಮಾಡಿದೆ. ಹಾಗೆಯೇ ಇದಕ್ಕೆ ಮುಖ್ಯ ಚುನಾವಣಾ ಆಯುಕ್ತರಾದ ಸುನಿಲ್ ಅರೋರಾ ಮತ್ತು ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಮತ್ತು ಸುಶೀಲ್ ಚಂದ್ರರವರು ಸಹಿ ಹಾಕುವ ಮೂಲಕ ಅನುಮೋದನೆಯನ್ನ ನೀಡಬೇಕಾಗಿದೆ.+