Job Description: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಂಟೊನಿಯೊ ಗುಟೆರೆಸ್ರವರು ವಿಶ್ವಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಸಿದ್ಧಾರ್ಥ್ ಚಟರ್ಜಿಯವರನ್ನು ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಇತ್ತೀಚಿಗೆ ನೇಮಿಸಿದರು. ಚಟರ್ಜಿಯವರಿಗೆ ಸುಸ್ಥಿರ ಅಭಿವೃದ್ಧಿ, ಮಾನವೀಯ ಸಮನ್ವಯ, ಶಾಂತಿ ಮತ್ತು ಸುರಕ್ಷತೆ, ಅಂತರರಾಷ್ಟ್ರೀಯ ಸಹಕಾರದ ಕ್ಷೇತ್ರಗಲ್ಲಿಇವರಿಗೆ 25 ವರ್ಷಗಳ ಅನುಭವವಿದೆ ಎಂದು ವಿಶ್ವಸಂಸ್ಥೆಯು ಹೇಳಿದೆ. ಇವರು ದೇಶದ ಅಭಿವೃದ್ಧಿ ಕಾರ್ಯದಲ್ಲಿ ಮತ್ತು ಸ್ಥಾನಿಕ ಸಂಯೋಜಕರು ಆಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.