Job Description: ಚೀನಾ ದೇಶವು ಕಳೆದ ನವೆಂಬರ್ ತಿಂಗಳ 24 ನೇ ತಾರೀಕಿನಂದು 'ಚಾಂಗ್ಇ-5 ಪ್ರೋಬ್ಗ್'ಎಂಬ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಈ ಬಾಹ್ಯಾಕಾಶ ನೌಕೆ ಇದೀಗ ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗೂ ಮಣ್ಣಿನ ಮಾಹಿತಿಯನ್ನು ಹೊತ್ತು ಯಶಸ್ವಿಯಾಗಿ ಭೂಮಿಯನ್ನು ತಲುಪಿದೆ. 40 ವರ್ಷಗಳ ಬಳಿಕೆ ಇದೆ ಮೊದಲ ಬಾರಿ ಚಂದ್ರನ ಮೇಲ್ಮೈ ಮಾದರಿ ಮಾಹಿತಿಯನ್ನು ಸಂಗ್ರಹಿಸಿದ ಮೊದಲ ನೌಕೆ ಇದಾಗಿದೆ. ಚೀನಾ ರಾಷ್ಟ್ರವು ಈ ಯೋಜನೆಗಾಗಿ 2004 ರಿಂದ ತಯಾರಿ ನಡೆಸಿತ್ತು, ಚಂದ್ರನ ಮೇಲಿನ ಮಾದರಿ ಮಾಹಿತಿಯನ್ನು ಸಂಗ್ರಹಿಸುವ ಯೋಜನೆಯು ಇದೀಗ ಯಶಸ್ಸಿವಿಯಾಗಿದೆ, ಎಂದು ಸಿಎನ್ಎಸ್ಎ ಮುಖ್ಯಸ್ಥ 'ಜಾಂಗ್ ಕೆಜಿಯಾನ್' ಮಾಹಿತಿ ನೀಡಿದ್ದಾರೆ.