Job Description: ಆತ್ಮನಿರ್ಭರ್ ಸ್ವದೇಶಿ ನಿರ್ಮಿತ ನೆಲದಿಂದ ನೆಲಕ್ಕೆ ಚಿಮ್ಮುವ ಪೃಥ್ವಿ-2 ಕ್ಷಿಪಣಿಯ, 1 ಸಾವಿರ ಕೆ.ಜಿ. ಸಿಡಿತಲೆಗಳನ್ನು ಸಾಗಿಸಬಲ್ಲ ಹಾಗೂ 300 ಕಿ.ಮೀ. ಚಲಿಸಬಲ್ಲ ಪೃಥ್ವಿ-2 ಮಿಸೈಲ್ನ ಪರೀಕ್ಷಾರ್ಥ ಪ್ರಯೋಗ ಒಡಿಶಾದ ಬಾಲಸೋರ್ ತೀರದಲ್ಲಿ ಇತ್ತೀಚಿಗೆ ಯಶಸ್ವಿಯಾಗಿ ನಡೆದಿದೆ ಎಂದು DRDO ಮಾಹಿತಿ ನೀಡಿದೆ. ಡಿಆರ್ಡಿಒ ನಿರ್ಮಿತ ಈ ಕ್ಷಿಪಣಿಯನ್ನು 2003ರಲ್ಲಿಯೇ ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗಿದ್ದು, ಪೃಥ್ವಿ-2 ಕ್ಷಿಪಣಿಯ ಗರಿಷ್ಠ 500 ಕಿ.ಮೀ ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ, ಈ ಕ್ಷಿಪಣಿಯ ಮಿತಿಯನ್ನು 350 ಕಿ.ಮೀಗೆ ನಿಗದಿಪಡಿಸಲಾಗಿದೆ ಎಂದು ಡಿಆರ್ಡಿಒ ಮಾಹಿತಿಯನ್ನು ನೀಡಿದೆ.