Job Description: SBI ಜನರಲ್ ಇನ್ಶುರೆನ್ಸ್ ಮತ್ತು ಮಹೀಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಲಿಮಿಟೆಡ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ, ಎರಡು ಮತ್ತು ಮೂರನೇ ಹಂತದ ನಗರ - ಪಟ್ಟಣಗಳಿಗೆ ವಿಮೆ ಸೌಲಭ್ಯ ವಿಸ್ತರಿಸಲು ಒಪ್ಪಂದ ಮಾಡಿಕೊಂಡಿವೆ. ಮಹೀಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜೈದೀಪ್ ಡಿ ಅವರು ಡಿಜಿಟಲ್ ವಿಧಾನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿಮೆ ಸೌಲಭ್ಯ ವಿಸ್ತರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈ ಒಪ್ಪಂದದಿಂದ ಕಾರು, ವಾಣಿಜ್ಯ ವಾಹನ, ಟ್ರ್ಯಾಕ್ಟರ್, ಬಳಸಿದ ಕಾರು ಹಾಗೂ ವಾಹನಗಳ ವಿಮೆ ವಿಸ್ತರಿಸಲು ಅನುಕೂಲವಾಗಲಿದೆ. ಅಲ್ಲದೆ ಈ ವಿಮೆ ಆರೋಗ್ಯದ ಕುರಿತು ಅರಿವು ಮೂಡಿಸುವಲ್ಲಿಯೂ ನೆರವಾಗಲಿದೆ. ಇದರಿಂದ ಹೆಚ್ಚು ಜನರು ಆರೋಗ್ಯ ವಿಮೆ ಪಡೆಯುವಲ್ಲಿ ಸಹಾಯವಾಗಲಿದೆ, ಎಂಬ ಭರವಸೆ ಇದೆ ಎಂದು ಎಸ್ಬಿಐ ಜನರಲ್ ಇನ್ಶುರೆನ್ಸ್ನ ಸಿಇಒ ಪಿ.ಸಿ. ಕಂದ್ಪಾಲ್ ರವರು ತಿಳಿಸಿದ್ದಾರೆ.