Job Description: ರಾಜಸ್ಥಾನದ ಜೈಪುರದಲ್ಲಿ RBI ನಿಂದ ಆಟೋಮೆಟೆಡ್ ಬ್ಯಾಂಕ್ ನೋಟ್ ಪ್ರೊಸೆಸಿಂಗ್ ಸೆಂಟರ್ ಅನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕರೆನ್ಸಿ ನೋಟುಗಳ ಸ್ವೀಕೃತಿ, ಸಂಗ್ರಹ ಹಾಗೂ ರವಾನೆಯನ್ನು ಇಲ್ಲಿಂದ ಮಾಡಲಾಗುತ್ತದೆ, ಕಾರಣ ಚಲಾವಣೆಯಲ್ಲಿ ಹೆಚ್ಚುತ್ತಿರುವ ಬ್ಯಾಂಕ್ ನೋಟುಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸೆಂಟರ್ ಅನ್ನು ಸ್ಥಾಪಿಸಲಾಗುತ್ತಿದೆ. 1,883 ಮಿಲಿಯನ್ ತುಂಡು ಹೊಸ ನೋಟುಗಳನ್ನು 2024- 25ರ ಸಾಲಿಗೆ ದಿನದ ಲೆಕ್ಕದಲ್ಲಿ ಸರಾಸರಿಯಲ್ಲಿ ಜೈಪುರದ ABPCನಲ್ಲಿ ಸಂಗ್ರಹಿಸಿಡಬಹುದಾಗಿದ್ದು, ಹಾಗೆ 27,757 ಮಿಲಿಯನ್ ತುಂಡು ನೋಟುಗಳನ್ನು 2039- 40ರ ಹೊತ್ತಿಗೆ ಸಂಗ್ರಹಿಸಬಹುದಾಗಿದೆ ಎಂದು RBI ತಿಳಿಸಿದೆ. ಚಲಾವಣೆಗೆ ಉಪಯುಕ್ತ ಅಲ್ಲ ಎಂದ್ ನೋಟುಗಳನ್ನು ಕರೆನ್ಸಿ ವೆರಿಫಿಕೇಷನ್ ಅಂಡ್ ಪ್ರೊಸೆಸಿಂಗ್ ಸಿಸ್ಟಮ್ ಮೂಲಕ ಪರಿಶೀಲನೆ ನಡೆಸಿ ನಾಶಪಡಿಸಲಾಗುತ್ತದೆ.