Job Description: ಇದೆ 2021 ರ ಫೆಬ್ರುವರಿ 08 ರಿಂದ 12 ರವರೆಗೆ "ತೋಟಗಾರಿಕಾ ಮೇಳ" ನಡೆಸಲು ರಾಜ್ಯ ರಾಜಧಾನಿ ಬೆಂಗಳೂರಿನ ಸಮೀಪ ಇರುವ ಹೆಸರಘಟ್ಟದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಅಧಿಕೃತವಾಗಿ ತಿಳಿಸಿದೆ. ಈ ಬಾರಿ ನಡೆಸುವ "ತೋಟಗಾರಿಕಾ ಮೇಳದ" ಘೋಷ್ಯವಾಕ್ಯ "ಸ್ಟಾರ್ಟ್ ಅಪ್ ಆಂಡ್ ಸ್ಟ್ಯಾಂಡ್ ಅಫ್ ಇಂಡಿಯಾಗೆ ತೋಟಗಾರಿಕೆ" ಈ ಬಾರಿಯ ತೋಟಗಾರಿಕಾ ಮೇಳದಲ್ಲಿ ಬಿಡುಗಡೆಯಾಗಲಿರುವ ಹೊಸ ತಳಿ ಹಾಗೂ ತಂತ್ರಜ್ಞಾನಗಳ ವಿವರಗಳು : * ಸೀಬೆಯಲ್ಲಿ ಹೊಸ ತಳಿ : "ಅರ್ಕ ಪೂರ್ಣ" * ಮೆಣಸಿನಕಾಯಿಯಲ್ಲಿ ಎಲೆ ಸುರುಳಿ ರೋಗ ನಿರೋಧಕ ಶಕ್ತಿ ಇರುವ ಹೈಬ್ರಿಡ್ "ಅರ್ಕ ಗಗನ್" * ಐಸ್ ಬಾಕ್ಸ್ ಪ್ರಕಾರದ ಕಲ್ಲಂಗಡಿ ತಳಿ : "ಅರ್ಕ ಶ್ಯಾಮ" * ಹಣ್ಣು-ತರಕಾರಿ ತೊಳೆಯುವ ರಾಸಾಯನಿಕ ಮುಕ್ತವಾದ ಉತ್ಪನ್ನ "ಅರ್ಕ ಹರ್ಬಿ ವಾಶ್"