Job Description: ಚೀನಾ ದೇಶವು ಇತ್ತೀಚಿಗಷ್ಟೇ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ 60 (GW) ಗಿಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಘಟಕ ನಿರ್ವಿುಸಲು ಮುಂದಾರುವ ಕುರಿತು ಘೋಷಿಸಿದ ಬೆನ್ನಲ್ಲೇ, ಭಾರತ ಸರ್ಕಾರವು ಕೂಡ ಅರುಣಾಚಲ ಪ್ರದೇಶದಲ್ಲಿ10 (GW) ಗಿಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಸ್ಥಾವರ ನಿರ್ವಿುಸಲು ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ. ಚೀನಾದ ಅಣೆಕಟ್ಟು ಯೋಜನೆಗಳಿಂದ ಭಾರತದಲ್ಲಿ ದಿಢೀರ್ ಪ್ರವಾಹ ಅಥವಾ ನೀರಿನ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿರುವ ಕಾರಣ ಭಾರತ ಸರ್ಕಾರವು ಈ ಯೋಜನೆಗೆ ಮುಂದಾಗಿರುವ ಕುರಿತು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿ ಟಿ.ಎಸ್. ಮೆಹ್ರಾ ಮಾಹಿತಿ ನೀಡಿದ್ದಾರೆ. # ಬ್ರಹ್ಮಪುತ್ರ ನದಿಯನ್ನು ಚೀನಾದಲ್ಲಿ ಯಾರ್ಲುಂಗ್ ಜಾಂಗ್ಬೋ ಎಂದು ಕರೆಯಲಾಗುತ್ತದೆ # ಬ್ರಹ್ಮಪುತ್ರ ನದಿ ಟಿಬೆಟ್ನಿಂದ ಅರುಣಾಚಲ ಪ್ರದೇಶ, ಮತ್ತು ಅಸ್ಸಾಂನಿಂದ ಬಾಂಗ್ಲಾದೇಶದ ವರೆಗೆ ಹರಿಯುತ್ತದೆ.