Job Description: ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಭಾರತೀಯ ಸಂತ ಗುರು ನಾನಕ್ ಅವರ ಹೆಸರಿಡಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ರಸ್ತೆಗೆ ಮರುನಾಮಕರಣ ನಡೆಯಲಿದೆ. ಇತ್ತೀಚಿಗೆ ನಡೆದ ಗುರುನಾನಕ ಅವರ ಜಯಂತಿಯ ದಿನ ಎಲ್ಲಿಂಗ್ ಕೌನ್ಸಿಲ್ ನ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಈ ರಸ್ತೆಗೆ ಹೆನ್ರಿ ವೆವ್ಲೊಕ್ ಅವರ ಹೆಸರಿದ್ದು, ಇವರು 1857 ರ ಭಾರತೀಯ ದಂಗೆಯಲ್ಲಿ ಬ್ರಿಟಿಷ್ ಸೇನೆಯ ಜನರಲ್ ಆಗಿದ್ದರು. ಬಳಿಕ 2021 ರಲ್ಲಿ ಅಧಿಕೃತವಾಗಿ ಈ ರಸ್ತೆಗೆ ಗುರುನಾನಕ ಅವರ ಹೆಸರಿನ ಮರು ನಾಮಕರಣ ನಡೆಯಲಿದೆ. * ಲಂಡನ್ ನಗರದ ಈ ಪ್ರದೇಶದಲ್ಲಿ ಅತಿ ಹೆಚ್ಚು ಸಿಖ್ ಧರ್ಮಿಯ ಜನಸಂಖ್ಯೆ ಇದ್ದು, ಈ ವರ್ಷ ನಡೆದ "ದ ಬ್ಲ್ಯಾಕ್ ಲೈವ್ಸ್ ಮ್ಯಾಟರ್" ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು.