Job Description: ಭಾರತೀಯ ನೌಕಾಪಡೆಯ ಪರೀಕ್ಷಾರ್ಥ ಪ್ರಯೋಗಗಳ ಭಾಗವಾಗಿ 'ಹಡಗು ನಿರೋಧಕ ಬ್ರಹ್ಮೋಸ್' ಕ್ಷಿಪಣಿ ಪರೀಕ್ಷೆಯನ್ನು ಭಾರತದ ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಮಂಗಳವಾರ ಯಶಸ್ವಿಯಾಗಿ ಪೂರೈಸಲಾಗಿದೆ. * ಇತ್ತೀಚಿಗಷ್ಟೇ ಭೂಮಿ ಮೇಲೆ ದಾಳಿ ನಡೆಸಬಲ್ಲ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. * ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಜಗತ್ತಿನಲ್ಲೇ ಅತ್ಯಂತ ವೇಗದ ಆಪರೇಷನಲ್ ಸಿಸ್ಟಮ್ ಹೊಂದಿರುವಂಥದ್ದಾಗಿದೆ. 298 ಕಿ.ಮೀ.ನಿಂದ 450 ಕಿ.ಮೀ. ತನಕದ ಗುರಿ ತಲುಪುವ ಸಾಮರ್ಥ್ಯವನ್ನು ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಹೊಂದಿದೆ. * ಡಿಆರ್ಡಿಒ ಅಭಿವೃದ್ಧಿ ಪಡಿಸಿದ ಹಲವು ಕ್ಷಿಪಣಿಗಳನ್ನು ಭಾರತೀಯ ಸೇನೆ ಪರೀಕ್ಷಾ ಪ್ರಯೋಗವನ್ನು ನೆರವೇರಿಸಿದ್ದು, ಇದೀಗ 400 ಕಿ.ಮೀ. ದೂರಕ್ಕೆ ಬ್ರಹ್ಮೋಸ್ ಕ್ಷಿಪಣಿಯ ದಾಳಿ ಗುರಿಯನ್ನು ವಿಸ್ತರಿಸಲಾಗಿದೆ.