Job Description: ಗುವಾಹತಿ: ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ತರುಣ್ ಗೋಗಯ್ ಅವರ ಅಂತ್ಯ ಕ್ರಿಯೆಯನ್ನು ಗುರುವಾರ ಸಕಲ ಸರ್ಕಾರಿ ಗೌರವವಗಳೊಂದಿಗೆ ಗುವಾಹತಿಯ ನಭಗ್ರಹ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಇವರು 2001 ರಿಂದ 2016 ರ ವರೆಗೆ ಒಟ್ಟು 15 ವರ್ಷಗಳ ಕಾಲ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದಲ್ಲದೆ ಅಸ್ಸಾಂ ರಾಜ್ಯದ ಅತಿ ದೀರ್ಘ ಕಾಲದ ಮುಖ್ಯಮಂತ್ರಿಯಾಗಿ ಹೆಗ್ಗಳಿಕೆ ಹೊಂದಿದ್ದಾರೆ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದು, ಪಕ್ಷವನ್ನು ಸತತ ಮೂರು ಚುನಾವಣಾ ವಿಜಯಗಳತ್ತ ಮುನ್ನಡೆಸಿದರು. ಮತ್ತು ಅಸ್ಸಾಂ ರಾಜ್ಯದ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಉಗ್ರಗಾಮಿ ದಂಗೆಯನ್ನು ಕೊನೆಗೊಳಿಸಿದ ಮತ್ತು ಹಿಂಸಾಚಾರವನ್ನು ತಗ್ಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.