Job Description: ಇದೆ ಮೊದಲ ಬಾರಿಗೆ ಬಿಹಾರ ರಾಜ್ಯದ ಪೂರ್ನಿಯಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗಾಗಿ ಎಟಿಎಂ ವ್ಯವಸ್ಥೆಯನ್ನು ಆರಂಭ ಮಾಡಿಕೊಡಲಾಗುತ್ತಿದೆ. ಬಿಹಾರದ ಕೇಂದ್ರ ಕಾರಾಗೃಹದಲ್ಲಿರುವ ಪ್ರಸ್ತುತ 750 ಖೈದಿಗಳಿದ್ದು, ಈ ಪೈಕಿ 600 ಜನ ಕೈದಿಗಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಇವರಲ್ಲಿ 400 ಜನರಿಗೆ ಎಟಿಎಂ ಕಾರ್ಡ್ ವಿತರಿಸಲಾಗಿದೆ. ಈ ಮೂಲಕ ಕೈದಿಗಳ ಪ್ರತಿನಿತ್ಯ ಮಾಡುವ ಎಂಟು ಗಂಟೆಗಳ ಕೆಲಸದ ಸಂಬಳವಾದ 52-103 ರೂ.ಗಳನ್ನು ಇವರ ಖಾತೆಗೆ ಜಮಾಮಾಡಲಾಗುವದು.