Job Description: ಇತ್ತೀಚಿಗೆ ನಿಧನರಾದ ಅರ್ಜೆಂಟೀನಾದ ವಿಶ್ವ ಫುಟ್ಬಾಲ್ ದಿಗ್ಗಜ ಡೀಗೋ ಮರಡೋನಾ ಮೂರು ಬಾರಿ (2007, 2012, 2017) ಭಾರತಕ್ಕೆ ಭೇಟಿ ನೀಡಿದ್ದರು. ಅವರ ಮೊದಲ ಭೇಟಿಯಲ್ಲಿ 2007ರಲ್ಲಿ ಕೋಲ್ಕತಕ್ಕೆ ಆಗಮಿಸಿದ್ದರು. ಈ ಭೇಟಿಯ ಸವಿ ನೆನಪಿಗಾಗಿ ಹಾಗು ವಿಶ್ವ ಫುಟ್ಬಾಲ್ ದಿಗ್ಗಜ ಡೀಗೋ ಮರಡೋನಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಸ್ಟೇಡಿಯಂಗೆ 'ಡೀಗೋ ಮರಡೋನಾ ಆದಿತ್ಯ ಸ್ಕೂಲ್ ಆಫ್ ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂ' ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. * ಮರಡೋನಾರವರು 2007ರ ಡಿಸೆಂಬರ್ 12 ರಂದು ಈ ಸ್ಟೇಡಿಯಂನಲ್ಲಿ ಪ್ರದರ್ಶನ ಪಂದ್ಯವಾಡಿದ್ದರು. * ಮರಡೋನಾ ನಾಯಕತ್ವದಲ್ಲಿ ಅರ್ಜೆಂಟೀನಾ ಫುಟ್ಬಾಲ್ ತಂಡವು 1986 ರಲ್ಲಿ ಫಿಫಾ ವಿಶ್ವಕಪ್ ಜಯಿಸಿತ್ತು.