Job Description: ಮುಂಬೈ : ಭಾರತದ 'ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಿತಾಮಹ' ಎಂದೇ ಹೆಸರಾಗಿದ್ದ IT ಉದ್ಯಮಿ ಫಕೀರ್ ಚಂದ್ ಕೊಹ್ಲಿ ಅವರು ಇತ್ತೀಚಿಗೆ ಹೃದಯಾಘಾತದಿಂದ ತಮ್ಮ 96 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಭಾರತದ ಪ್ರಮುಖ ಐಟಿ ಕಂಪೆನಿಗಳಲೊಂದಾದ TCS(Tata Consultancy Services) ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದರು. 1951ರಲ್ಲಿ ಟಾಟಾ ಎಲೆಕ್ಟ್ರಿಕ್ ಸಂಸ್ಥೆ ಸೇರಿದ ಇವರು 1968ರಲ್ಲಿ ಎಫ್.ಸಿ.ಕೊಹ್ಲಿಯವರನ್ನು ಟಿಸಿಎಸ್ ಎಂಬ ಸ್ಟಾರ್ಟ್ಅಪ್ ಕಂಪನಿ ಆರಂಭಿಸಲು ಆಯ್ಕೆ ಮಾಡಿಕೊಳ್ಳಲಾಯಿತು. * ಪ್ರಸ್ತುತ ಟಿಸಿಎಸ್ ಇಂದು ವಿಶ್ವದ ಮೂರನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಮುನ್ನಡೆಯುತ್ತಿದ್ದು, ಟಾಟಾ ಸಮೂಹದ ಒಟ್ಟು ಲಾಭದ ಶೇಕಡ 70ರಷ್ಟು ಕೊಡುಗೆ ಈ ಕಂಪನಿ ನೀಡುತ್ತಿದೆ.