Job Description: ನವದೆಹಲಿ : ಭಾರತದ ಅರಬ್ಬೀ ಸಮುದ್ರದಲ್ಲಿ ಭಾರತ , ಸಿಂಗಾಪುರ್ ಮತ್ತು ಥೈಲ್ಯಾಂಡ್ ರಾಷ್ಟ್ರಗಳ ಎರಡು ದಿನಗಳ ನೌಕಾ ಸಮಾರಾಭ್ಯಾಸ ಸಿಟ್ ಮೆಕ್ಸ್-2020 ನಡೆಯುತ್ತಿದೆ. ತ್ರಿ ರಾಷ್ಟ್ರಗಳ ನೌಕಾಪಡೆಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೊಂಡಿವೆ. ಈ ಸಮರಾಭ್ಯಾಸದಲ್ಲಿ ಭಾರತ, ಸಿಂಗಾಪುರ್ ಮತ್ತು ಥೈಲ್ಯಾಂಡ್ನ ಸಮರ ನೌಕೆಗಳು, ಜಲಾಂತರ್ಗಾಮಿಗಳು ಸೇರಿ ನೌಕಾ ಪಡೆಯ ವಿವಿಧ ಯುದ್ಧ ಸಾಮಗ್ರಿಗಳ ತಾಲೀಮಿನಲ್ಲಿ ತ್ರಿ ರಾಷ್ಟ್ರಗಳು ಪಾಲ್ಗೊಂಡಿವೆ.