Job Description: ಬೀಜಿಂಗ್: ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗು ಮಣ್ಣಿನ ಸಂಗ್ರಹಿಸುವ ಸಲುವಾಗಿ ನೆರೆಯ ಚೀನಾ ರಾಷ್ಟ್ರವು ಮಾನವರಹಿತ ನೌಕೆಯೊಂದನ್ನು ಉಡಾವಣೆ ಮಾಡಿದೆ. * ಇನ್ನು 2022 ರೊಳಗಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸುವ ಯೋಜನೆಯನ್ನು ಹೊಂದಿರುವ ಚೀನಾ ರಾಷ್ಟ್ರವು ಮಾನವಸಹಿತ ಚಂದ್ರಯಾನ ಮಿಷನ್ ಗೆ ಯೋಜನೆಯನ್ನು ರೂಪಿಸಿದೆ. * ಚಂದ್ರನ ಮೇಲ್ಮೈಯಲ್ಲಿ ಜ್ವಾಲಾಮುಖಿ, ಚಂದ್ರನ ರಚನೆಯನ್ನು ಸೇರಿ ಹಲವು ವಿಷಯಗಳ ಅಧ್ಯಯನಕ್ಕಾಗಿ 'ಚಾಂಗ್ಇ-5 ಪ್ರೊಬ್' ನೌಕೆಯನ್ನು ಉದಯಿಸಲಾಗಿದ್ದು, ಅಂದಾಜು 2 kg ಗಳಷ್ಟು ಕಲ್ಲು ಮಣ್ಣಿನ ಸಂಗ್ರಹದೊಂದಿಗೆ ಡಿಸೆಂಬರ್ನಲ್ಲಿ ಚೀನಾದ ಮಂಗೋಲಿಯಾ ಪ್ರದೇಶಕ್ಕೆ ಮರಳುವ ಸಾಧ್ಯತೆಯಿದೆ.