Job Description: ಇಡೀ ವಿಶ್ವವೇ ಕೋವಿಡ್ 19 ಸಾಂಕ್ರಾಮಿಕದಿಂದ ತತ್ತರಿಸಿದ ಬಳಿಕ, ಮೊದಲ ಬಾರಿಗೆ ಜಿ20 ಶೃಂಗಸಭೆ ಆಯೋಜನೆ ಮಾಡಲಾಗಿದ್ದು, ಜಿ20 ಇತಿಹಾಸದಲ್ಲೇ ಮೊದಲ ಬಾರಿಗೆ ಅರಬ್ ರಾಷ್ಟ್ರವು ಜಿ20 ಶೃಂಗಸಭೆಯನ್ನು ಆಯೋಜಿಸಿತು. ಇದೆ ನವೆಂಬರ್ 21 ಮತ್ತು 22 ರಂದು ವರ್ಚುಯಲ್ ಸಭೆಯ ಮೂಲಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು. G-20 ಗುಂಪು : 1999 ರಲ್ಲಿ ವಿಶ್ವದ ಪ್ರಮುಖ 20 ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರಗಳ ಗುಂಪು G-20 (ಗ್ರೂಪ್ ಆಫ್ ಟ್ವೆಂಟಿ) ಅಸ್ತಿತ್ವಕ್ಕೆ ಬಂದಿತು. ಈ ಸಂಘಟನೆಯ ಮೂಲಕ ಅಂತರರಾಷ್ಟ್ರೀಯ ಆರ್ಥಿಕ ಸ್ಥಿರತೆಯನ್ನು ಚರ್ಚಿಸಲು ಹಾಗು ಅಭಿವೃದ್ಧಿ ಸಾಧಿಸುವ ಒಂದು ವಿಶ್ವ ಗುಂಪಾಗಿ ಕಲ್ಪಿಸಲಾಗಿತ್ತು. G20 ಸದಸ್ಯ ರಾಷ್ಟ್ರಗಳು : ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ ಗಣರಾಜ್ಯ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ , ಮತ್ತು ಯುರೋಪಿಯನ್ ಯೂನಿಯನ್.