Job Description: ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಈ ಆಚರಣೆಯ ಮೂಲಕ ವಿಶ್ವದಾದ್ಯಂತ ಮಕ್ಕಳಲ್ಲಿ ಅಂತರರಾಷ್ಟ್ರೀಯ ಒಗ್ಗಟ್ಟು ಮತ್ತು ಜಾಗೃತಿ ಮೂಡಿಸಲಾಗುವದು. ವಿಶ್ವ ಮಕ್ಕಳ ದಿನವನ್ನು ಮೊದಲಿಗೆ 1954 ರಲ್ಲಿ ಸಾರ್ವತ್ರಿಕ ಮಕ್ಕಳ ದಿನವೆಂದು ಆಚರಿಸಲಾಯಿತು, ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 20,1959 ರಂದು ಮಕ್ಕಳ ಹಕ್ಕುಗಳ ಘೋಷಣೆ ಅನುಮೋದಿಸಿತು. * ಜಗತ್ತಿನಾದ್ಯಂತ ಆಯಾ ರಾಷ್ಟ್ರಗಳು ಮಕ್ಕಳ ದಿನವನ್ನು ವಿವಿಧ ದಿನಾಂಕಗಳಂದು ಆಚರಿಸುತ್ತವೆ, ಅದೇ ರೀತಿ ಭಾರತದಲ್ಲಿ ಮೊದಲು ಪ್ರಧಾನಿ ಜವಾಹರಲಾಲ್ ನೆಹರೂರವರ ಜನ್ಮದಿನ ನವೆಂಬರ್ 14 ರಂದು ಆಚರಿಸಲಾಗುತ್ತದೆ.