Job Description: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಲೊಟೇ ಶೆರಿಂಗ್ ರವರು ದಿನಾಂಕ 20 ನವೆಂಬರ್ 2020 ರಂದು ಭೂತಾನ್ ಪ್ರಜೆಗಳಿಗಾಗಿ ಭಾರತದ ರುಪೇ ಕಾರ್ಡ್ ಫೇಸ್ 2 ಕ್ಕೆ ಚಾಲನೆ ನೀಡಿದರು. * ಈ ಮೂಲಕ ಉಭಯ ರಾಷ್ಟ್ರಗಳ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಾಯಿತು. * ಇನ್ನು ಭೂತಾನ್ನ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಲು ಇಸ್ರೋ ಕೂಡ ಸಿದ್ದತೆ ನಡೆಸಿದೆ. * ಈಗಾಗಲೇ ಮೊದಲನೇ ಹಂತದಲ್ಲಿ ರುಪೇ ಫೇಸ್ 1 ಕ್ಕೆ ಕಳೆದ ಆಗಸ್ಟ್ ತಿಂಗಳಲ್ಲೇ ಚಾಲನೆ ನೀಡಲಾಗಿತ್ತು. * ಇನ್ನು ಭೂತಾನ್ ರಾಷ್ಟ್ರವು ಮೂರನೇ ಅಂತಾರಾಷ್ಟ್ರೀಯ ಇಂಟರ್ನೆಟ್ ಗೇಟ್ವೇ ಸಂಬಂಧಿಸಿದ ಒಪ್ಪಂದವನ್ನು ಭಾರತದ ಬಿಎಸ್ಎನ್ಎಲ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವುದು ವಿಶೇಷ.