Job Description: ನವದೆಹಲಿ: ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು 131ನೇ ಜನ್ಮದಿನ ಹಿನ್ನಲೆಯಲ್ಲಿ ದೇಶ್ಯಾದ್ಯಂತ ಇವರಿಗೆ ಗೌರವ ಸಮರ್ಪಿಸಲಾಯಿತು. ಇವರ ಮಕ್ಕಳ ಮೇಲಿನ ಅತೀವ ಪ್ರೀತಿಯ ಕಾರಣ ಇವರ ಜನ್ಮ ದಿನವನ್ನು 'ಮಕ್ಕಳ ದಿನಾಚರಣೆ'ಯಾಗಿ ದೇಶ್ಯಾದ್ಯಂತ ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿ, ಆಗಸ್ಟ್ 15, 1947 ರಂದು ದೇಶದ ಮೊದಲ ಪ್ರಧಾನಮಂತ್ರಿ ಹುದ್ದೆಗೇರಿದ್ದ ಜವಾಹರಲಾಲ್ ನೆಹರೂರವರು 1889ರ ನವೆಂಬರ್ 14 ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್'ನಲ್ಲಿ ಜನಿಸಿದ್ದರು. ಹಾಗೂ ಮೇ 27, 1964 ರಂದು ವಿಧಿವಶರಾಗಿದ್ದರು.