Job Description: ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ನಿರಾಶ್ರಿತರ ಜನರಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ವಿವರಗಳು : * ಪಶ್ಚಿಮ ಬಂಗಾಳ ರಾಜ್ಯದ ತುಂಬಾ ನಿರಾಶ್ರಿತರು ನೆಲೆಸಿದ್ದು, ಇವರಿಗಾಗಿ ಹೊಸದಾಗಿ 25 ಸಾವಿರ ಪ್ಲಾಟ್(ನಿವೇಶನ) ನೀಡಲು ಯೋಜಿಸಿದೆ. * ಎರಡು ಲಕ್ಷ ಜನರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ದ್ವಿಚಕ್ರ ವಾಹನಗಳನ್ನು ಖರೀದಿಸಲು ಸಾಲ ಸೌಲಭ್ಯ ಕಲ್ಪಿಸಲಾಗುವುದು. * ಇನ್ನು ವಾರ್ಷಿಕವಾಗಿ 1.5 ಲಕ್ಷ ರೂ. ಮೊತ್ತದ ಕ್ಯಾನ್ಸರ್, ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸೆಗಳು, ನರ ಶಸ್ತ್ರಚಿಕಿತ್ಸೆಗಳು, ರಕ್ತದ ಕಾಯಿಲೆಗಳು, ಪಿತ್ತಜನಕಾಂಗದ ಕಾಯಿಲೆಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಯೋಜನೆಯ ಸಂಪೂರ್ಣ ಪ್ರೀಮಿಯಂ ಅನ್ನು ರಾಜ್ಯ ಸರ್ಕಾರ ಭರಿಸುತ್ತದೆ. - ಪಶ್ಚಿಮ ಬಂಗಾಳ ಸರ್ಕಾರವು 2018 ರಲ್ಲಿ ಮಾಟುವಾ ಅಭಿವೃದ್ಧಿ ಮಂಡಳಿ(Matua Development Board) ಸ್ಥಾಪಿಸಿದ್ದು, ಈ ಮಂಡಳಿಗಳು ಆಯಾ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.