Job Description: ಮಡಿಕೇರಿ: ಯುಎಸ್ಎ ಸ್ಟ್ಯಾನ್ಬೋರ್ಡ್ ವಿಶ್ವವಿದ್ಯಾನಿಲಯ ಇತ್ತೀಚಿಗೆ ನಡೆಸಿದ ಅನಲೈಟಿಕಲ್ ಕೆಮೆಸ್ಟ್ರಿ ಮತ್ತು ಎನರ್ಜಿ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ಪ್ರಮುಖ ಶೇಕಡಾ 02 ವಿಜ್ಞಾನಿಗಳ ಸಮೀಕ್ಷೆಯಲ್ಲಿ ಕರ್ನಾಟಕದ ಡಾ.ಜೆ.ಜಿ.ಮಂಜುನಾಥ ಅವರು ಸ್ಥಾನಪಡೆದಿದ್ದಾರೆ. * ಡಾ.ಜೆ.ಜಿ.ಮಂಜುನಾಥ ಅವರು ಈವರೆಗೆ 93 ಅಂತರಾಷ್ಟ್ರೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಪ್ರಸುತ್ತ 7 ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. * ಪ್ರಸ್ತುತ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.