Job Description: ನವದೆಹಲಿ: ಭಾರತ-ಫ್ರಾನ್ಸ್ ರಾಷ್ಟ್ರಗಳ ನಡುವೆ ಏರ್ಪಟ್ಟ ಒಪ್ಪಂದದಂತೆ ಎರಡನೇ ಹಂತದಲ್ಲಿ ಫ್ರಾನ್ಸ್ ರಾಷ್ಟ್ರವು ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಹಸ್ತಾಂತರಿಸಿದೆ. ಒಟ್ಟು ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ನಿಂದ ಭಾರತಕ್ಕೆ ತಡೆ ರಹಿತ ಎಂಟು ಗಂಟೆಗಳ ಹಾರಾಟದೊಂದಿಗೆ ಭಾರತವನ್ನು ತಲುಪಿವೆ. 8 ಗಂಟೆಗಳ ದೀರ್ಘ ಪ್ರಯಾಣದಲ್ಲಿ ಮಾರ್ಗ ಮಧ್ಯೆ ಮೂರು ಬಾರಿ ಇಂಧನ ಭರ್ತಿ ಮಾಡಲಾಗಿದೆ. ಈ ಮೂಲಕ ರಫೇಲ್ ಯುದ್ಧ ವಿಮಾನಗಳು ದೂರ ವ್ಯಾಪ್ತಿಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ತೋರಿಸಿಕೊಟ್ಟಿವೆ. * ದಿನಾಂಕ ಜುಲೈ 29ರಂದು ಮೊದಲ ಹಂತದಲ್ಲಿ 5 ರಫೇಲ್ಗಳು ಭಾರತ ತಲುಪಿದ್ದವು ಇದೀಗ ಮತ್ತೆ ಮೂರೂ ಸೇರ್ಪಡೆಗೊಂಡಿವೆ. ಒಟ್ಟು ₹59,000 ಕೋಟಿ ವೆಚ್ಚದಲ್ಲಿ 36 ರಫೇಲ್ ಜೆಟ್ ಗಳ ಖರೀದಿಗೆ ಫ್ರಾನ್ಸ್ ಸರ್ಕಾರದೊಂದಿಗೆ ಭಾರತವು ಒಪ್ಪಂದ ಮಾಡಿಕೊಂಡಿದೆ.