Job Description: ಇತ್ತೀಚಿಗೆ ಕೇಂದ್ರ ಸಚಿವ ಸಂಪುಟವು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಇಸ್ರೇಲ್ ಜೊತೆಗಿನ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಇಸ್ರೇಲ್ ಜೊತೆಗಿನ ಈ ಒಪ್ಪಂದದಿಂದ ವೈದ್ಯಕೀಯ ಸಾಧನಗಳು, ಔಷಧಗಳು ಮತ್ತು ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಉಭಯ ರಾಷ್ಟ್ರಗಳು ಪರಸ್ಪರ ವಿನಿಮಯ ಮಾಡಿಕೊಳ್ಳಲಿವೆ. ಹಾಗು ಸಾರ್ವಜನಿಕ ಆರೋಗ್ಯ ಕುರಿತ ಕ್ರಮಗಳು ಮತ್ತು ಹವಾಮಾನ ಅಪಾಯಗಳ ಬಗ್ಗೆ ಪರಸ್ಪರ ಕೌಶಲ್ಯಗಳನ್ನು ಹಂಚಿಕೊಳ್ಳುವುದು. * ಇಸ್ರೇಲ್ ಭಾರತಕ್ಕೆ ಏಪ್ರಿಲ್ 2020 ರಲ್ಲಿ, COVID-19 ವಿರುದ್ಧ ಹೋರಾಡಲು ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಪೂರೈಸಿತು. ಪ್ರತಿಯಾಗಿ ಭಾರತವು ಇಸ್ರೇಲ್ ದೇಶಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಐದು ಟನನಷ್ಟು ಔಷಧಿಗಳನ್ನು ಇಸ್ರೇಲ್ ಗೆ ಕಳುಹಿಸಿತು. * ಇನ್ನು ಕೃಷಿ ಕ್ಷೇತ್ರದಲ್ಲಿ ಭಾರತ ಮತ್ತು ಇಸ್ರೇಲ್ ಸುದೀರ್ಘ ಇತಿಹಾಸ ಮತ್ತು ಬಲವಾದ ಸಹಕಾರವನ್ನು ಹೊಂದಿವೆ. ಹಾಗು ರೈತರಿಗೆ ತರಬೇತಿ ನೀಡುತ್ತವೆ ಮತ್ತು ಸುಧಾರಿತ ಕೃಷಿ ಪದ್ಧತಿಗಳ ಬಗ್ಗೆ ಜ್ಞಾನವನ್ನು ಇಸ್ರೇಲ್ ತಜ್ಞರು ನೇರವಾಗಿ ಭಾರತದೊಂದಿಗೆ ಹಂಚಿಕೊಳ್ಳುತಾರೆ.