Job Description: ಭಾರತವು ಇಂಡೋನೇಷ್ಯಾದಿಂದ ಹೆಚ್ಚಿನ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದು, ಈ ಕುರಿತು ಇಂಡೋನೇಷ್ಯಾ ದೊಂದಿಗೆ 5 ನೇ ಜಂಟಿ ಸಭೆ ನಡೆಸಿತು. ಇಂಡೋನೇಷ್ಯಾ ಏಕೆ ? ಕೋರೋಣ ಸಾಂಕ್ರಾಮಿಕ ರೋಗದಿಂದಾಗಿ 2020 ರ ಸೆಪ್ಟೆಂಬರ್ನಲ್ಲಿ ಇಂಡೋನೇಷ್ಯಾದ ಕಲ್ಲಿದ್ದಲು ಬೆಲೆ ಬಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಇದೆ ಕಾರಣದಿಂದ ಭಾರತವು ಇಂಡೋನೇಷ್ಯಾದಿಂದ ಕಲ್ಲಿದ್ದಲು ಆಮದನ್ನು ಹೆಚ್ಚಿಸಲಿದೆ. ಇಂಡೋನೇಷ್ಯಾವು ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರವಾಗಿದೆ. ಹಾಗು ವಿಶ್ವ ಕಲ್ಲಿದ್ದಲು ರಫ್ತಿನಲ್ಲಿ ಶೇಕಡಾ 40 ರಷ್ಟು ಪಾಲನ್ನು ಕೇವಲ ಇಂಡೋನೇಷ್ಯಾ ಹೊಂದಿದೆ. * ಭಾರತದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳಿವೆ. * ಭಾರತವು 2020 ರವರೆಗೆ ಇಂಡೋನೇಷ್ಯಾದಿಂದ 128.7 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.