Job Description: ಕಠ್ಮಂಡು: ಭಾರತದ ನೆರೆಯ ರಾಷ್ಟ್ರ ನೇಪಾಳಕ್ಕೆ ಭೇಟಿ ನೀಡಿರುವ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಅವರಿಗೆ ನೇಪಾಳ ಸೇನೆಯ ಜನರಲ್ ರ್ಯಾಂಕ್ ಗೌರವ ನೀಡಿ ಗೌರವಿಸಲಾಗಿದೆ. ನೇಪಾಳ ಪ್ರವಾಸದಲ್ಲಿರುವ ಇವರಿಗೆ ಇತ್ತೀಚಿಗೆ ನಡೆದ ವಿಶೇಷ ಸಮಾರಂಭದಲ್ಲಿ ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ನೇಪಾಳ ಸೇನೆಯ ಈ ಗೌರವವನ್ನು ನರವಾಣೆಗೆ ಪ್ರದಾನ ಮಾಡಿದರು. ಈ ಮೂಲಕ ಉಭಯ ರಾಷ್ಟ್ರಗಳ ಸೇನಾ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಾಯಿತು. ಉಭಯ ರಾಷ್ಟ್ರಗಳ ಸೇನೆಗಳ ನಡುವಣ ದೃಢ ಸಂಬಂಧದ ಪ್ರತಿಬಿಂಬಿವಾಗಿ 1950 ರಲ್ಲಿ ಮೊದಲ ಬಾರಿಗೆ ಜನರಲ್ ಕೆ ಎಂ ಕಾರಿಯಪ್ಪ ಅವರಿಗೆ ಈ ಗೌರವ ನೀಡಲಾಗಿತ್ತು. ಇನ್ನು ಕಳೆದ ವರ್ಷ ನೇಪಾಳ ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ತಪಾರವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 'ಗೌರವ ಜನರಲ್' ನ್ನು ಪ್ರದಾನ ಮಾಡಿದ್ದರು.