Job Description: ಗಾಂಧಿನಗರ: ದೇಶದ ಪ್ರಪ್ರಥಮ ಸೀಪ್ಲೇನ್(ಸಮುದ್ರ ವಿಮಾನ)ಕ್ಕೆ ಇತ್ತೀಚಿಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದರು. ಅಕ್ಟೋಬರ್ 31 ರ ರಾಷ್ಟ್ರೀಯ ಏಕತಾ ದಿನದಂದು "ಸರ್ದಾರ್ ವಲ್ಲಭಭಾಯಿ ಪಟೇಲ್" ಅವರ 145ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮೋದಿಯವರು ದೇಶದ ಪ್ರಪ್ರಥಮ ಸೀಪ್ಲೇನ್ ಸ್ಟ್ಯಾಚ್ಯೂ ಆಫ್ ಯುನಿಟಿ ಸ್ಥಳದಿಂದ ಚಾಲನೆ ನೀಡಿದ್ದು, ಈ ಸೀಪ್ಲೇನ್ ಅಹಮದಾಬಾದ್ನ ಸಬರಮತಿ ವರೆಗೆ ಸಂಚರಿಸಲಿದೆ. * ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಈ ಸೇವೆ ಆರಂಭಿಸಲಾಗಿದೆ. * ಈ ವಿಮಾನಗಳು ನೀರಿನ ಮೇಲೆ ಟೇಕಾಫ್ ಹಾಗೂ ಲ್ಯಾಂಡಿಂಗ್ ಆಗುವ ವಿಶೇಷ ಸೌಲಭ್ಯವನ್ನು ಹೊಂದಿವೆ ಅದೇ ಕಾರಣಕ್ಕೆ ಇವುಗಳನ್ನು ಸೀಪ್ಲೇನ್ ಎನ್ನಲಾಗುವದು.