Job Description: ಕೆವಾಡಿಯಾ : ಗುಜರಾತ ರಾಜ್ಯದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ 'ಏಕತಾ ಪ್ರತಿಮೆ'ಯ ಸಮೀಪದಲ್ಲಿ (ಕೆವಾಡಿಯಾ ಎಂಬಲ್ಲಿ) ಪ್ರಧಾನಿ ಮೋದಿಯವರು ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಉದ್ಯಾನ 'ಆರೋಗ್ಯ ವನ' ಕ್ಕೆ ಚಾಲನೆ ನೀಡಿದರು. ಒಟ್ಟು 17 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಈ 'ಆರೋಗ್ಯ ವನ'ದಲ್ಲಿ ವೈವಿಧ್ಯಮಯ ಔಷಧೀಯ ಸಸ್ಯ ಹಾಗೂ ವಿವಿಧ ಬಗೆಯ ಗಿಡಮೂಲಿಕೆಗಳನ್ನು ಬೆಳೆಸಲಾಗಿದೆ. ಈ ಮೂಲಕ ಔಷದಿ ಸಸ್ಯಗಳ ಮಹತ್ವವನ್ನು ತಿಳಿಸಲಾಗುವದು.