Job Description: ನವದೆಹಲಿ: ಭಾರತದಲ್ಲಿರುವ 19 ರಾಜ್ಯಗಳ 736 ಡ್ಯಾಮ್ ಗಳ ನಿರ್ವಹಣೆಗಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ಯೋಜನೆಯನ್ನು ರೂಪಿಸಲಾಗಿದೆ. ಹಾಗೂ ಈ ಹೊಸ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ನೂತನ ಯೋಜನೆಯಡಿಯಲ್ಲಿ ಮುಂದಿನ 10 ವರ್ಷಗಳ ಕಾಲ ಡ್ಯಾಂಗಳನ್ನು ನಿರ್ವಹಣೆ ಮಾಡಲು ಅಗತ್ಯವಿರುವ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವದು. ಇದಕ್ಕಾಗಿ ಅಂದಾಜು 10,211 ಕೋಟಿ ರೂಪಾಯಿ ನೆರವು ನೀಡಲಾಗುವುದು. ಅಲ್ಲದೇ, ಡ್ಯಾಂಗಳ ಸುರಕ್ಷತೆ ಮತ್ತು ದೇಶದ ಜನರಿಗೆ ನೀರಿನ ಭದ್ರತೆ ಒದಗಿಸುವುದು, ಅಭಿವೃದ್ಧಿ ಕೆಲಸಗಳ ಮೂಲಕ ಉದ್ಯೋಗ ಸೃಷ್ಟಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.