Job Description: ಬೆಂಗಳೂರು :ರಾಜ್ಯದಲ್ಲಿ ಪ್ರಸ್ತುತ ಪೊಲೀಸ್, ಆಂಬುಲೆನ್ಸ್ ಹಾಗು ಅಗ್ನಿಶಾಮಕ ಸಹಾಯಕ್ಕೆ ಬೇರೆ ಬೇರೆ ಸಹಾಯವಾಣಿ ಸಂಖ್ಯೆಗಳಿದ್ದು, ಇದರಿಂದಾಗಿ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಗೊಂದಲಕ್ಕೀಡಾಗುವ ಸಾಧ್ಯತೆ ಹೆಚ್ಚಿರುವ ಕಾರಣ ರಾಜ್ಯ ಸರ್ಕಾರವು ಇನ್ನು ಯಾವುದೇ ತುರ್ತು ಸಂದರ್ಭಕ್ಕೂ ಒಂದೇ ಸಹಾಯವಾಣಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಎಲ್ಲಾ ತುರ್ತು ಸಂದರ್ಭದಲ್ಲಿ ಇನ್ನು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಎಲ್ಲಾ ಸೇವೆ ಪಡೆಯಬಹುದು. ಈ ನೂತನ ಸಹಾಯವಾಣಿ ಈಗಾಗಲೇ 6 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಜ್ಯಾಧ್ಯಂತ ಜಾರಿಗೆ ಬರಲಿದೆ.