Job Description: ಇತ್ತೀಚಿಗೆ ನೆದರ್ಲ್ಯಾಂಡ್ ವಿಜ್ಞಾನಿಗಳು ಮಾನವನ ಮೂಗಿನ ಹಿಂಭಾಗದಲ್ಲಿ ಕಂಡುಬರುವ ಹೊಸ ಅಂಗವನ್ನು ಪತ್ತೆಹಚ್ಚಿದ್ದಾರೆ. ಹಾಗೂ ಇದನ್ನು ಟ್ಯೂಬೀರಿಯಲ್ ಲಾಲಾರಸ ಗ್ರಂಥಿ (Tuberial Salivary Gland) ಎಂದು ಹೆಸರಿಸಿದ್ದಾರೆ. * ಈ ಅಂಗವನ್ನು ನೆದರ್ಲ್ಯಾಂಡ್ನ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ಪ್ರಾಸ್ಟೇಟ್ ಕ್ಯಾನ್ಸರ್ ಕುರಿತು ಸಂಶೋಧನೆ ನಡೆಸುತ್ತಿರುವಾಗ ಕಂಡುಹಿಡಿದಿದ್ದು, ಅಂಗವು ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಮಾಡುತ್ತದೆ. * ಈ ಹೊಸ ಗ್ರಂಥಿಯ ಪತ್ತೆ ಬಳಿಕ ಮಾನವ ದೇಹದಲ್ಲಿ ಒಟ್ಟು ಲಾಲಾರಸ ಗ್ರಂಥಿಗಳ ಸಂಖ್ಯೆ 4 ಕ್ಕೆ ಏರಿದೆಯಾಗಿದೆ.