Job Description: ದುಬೈ: ಮುಸ್ಲಿಂ ರಾಷ್ಟ್ರವಾಗಿರುವ ಸೌದಿ ಅರೇಬಿಯಾಯಿಂದ ಭಾರತಕ್ಕೆ ವಿಶೇಷ ಕೊಡುಗೆಗಳು ಲಭಿಸಿದ್ದು, ಭಾರತದಲ್ಲಿ 75 ಶತಕೋಟಿ ಡಾಲರ್ ಬಂಡವಾಳ ಹೂಡಲು ಸೌದಿ ಆಸಕ್ತಿ ತೋರಿದೆ. ಇನ್ನು ಸೌದಿ ಅರೇಬಿಯಾಯು ಈ ಹಿಂದೆ ಪಾಕಿಸ್ತಾನಕ್ಕೆ ನೀಡಿದ್ದ ಒಂದು ಶತಕೋಟಿ ಡಾಲರ್ ಸಾಲವನ್ನು ವಾಪಸ್ ಸಂಗ್ರಹಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ. ಇನ್ನು ಸೌದಿ ಅರೇಬಿಯಾ ರಾಷ್ಟ್ರವು ಭಾರತದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹ ಸಂಸ್ಥೆಗಳಲ್ಲಿ 15 ಶತಕೋಟಿ ಡಾಲರ್ ಬಂಡವಾಳ ಹೂಡಲು ಈಗಾಗಲೇ ಆಸಕ್ತಿ ತೋರಿದೆ. * ನವೆಂಬರ್ 21 ಮತ್ತು 22ರಂದು ನಡೆಯುವ ಜಿ-20 ಶೃಂಗಸಭೆಯ ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಲಿದೆ.