Job Description: ಬೆಂಗಳೂರು : ಕೊರೋನಾ ಸೋಂಕಿನ ಭೀತಿಯಿಂದ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಿ ಸುಮಾರು ತಿಂಗಳುಗಳ ಬಳಿಕ ರಾಜ್ಯ ಸರ್ಕಾರವು ಕಾಲೇಜುಗಳ ತರಗತಿಗಳನ್ನು ಆರಂಭಿಸಲು ಒಲವು ತೋರಿದ್ದು, ಇದೆ ನವೆಂಬರ್ 17 ರಿಂದ ಕಾಲೇಜುಗಳ ಆರಂಭಿಸುವುದಾಗಿ ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಘೋಷಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಜ್ಞರೊಂದಿಗೆ ನಡೆಸಿದ ಸಭೆಯಾ ಬಳಿಕ ಕೊರೋನಾ ಸೋಂಕಿನ ಮುಂಜಾಗ್ರತೆಗಾಗಿ ಸುರಕ್ಷಾ ಕ್ರಮಗಳೊಂದಿಗೆ ರಾಜ್ಯದಲ್ಲಿ ನವೆಂಬರ್ 17 ನೇ ತಾರೀಕಿನಿಂದ ಪದವಿ ಕಾಲೇಜುಗಳನ್ನು ಹೈಬ್ರಿಡ್ ಮಾದರಿಯಲ್ಲಿ ತೆರೆಯಲು ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.