Job Description: ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಸಮೀಪದಲ್ಲಿರುವ ಯಲಹಂಕ ರೈಲು ಚಕ್ರ ಕಾರ್ಖಾನೆ (ಆರ್ ಡಬ್ಲ್ಯುಎಫ್) ಯು ಇದೆ ಮೊದಲ ಬಾರಿಗೆ ವಿದೇಶಕ್ಕೆ ರೈಲು ಗಾಲಿ ಹಾಗೂ ಎಕ್ಸಲ್ ಗಳನ್ನು ತಯಾರಿಸಿ ರಪ್ತು ಮಾಡಲಿದೆ. ಆಫ್ರಿಕಾದ ಮೊಜಾಂಬಿಕ್ ದೇಶವು ಯಲಹಂಕ ರೈಲು ಚಕ್ರ ಕಾರ್ಖಾನೆಗೆ ಒಟ್ಟು 1485 ಚಕ್ರಗಳು ಮತ್ತು ಆಕ್ಸಲ್ಗಳನ್ನು ಬೇಡಿಕೆಯಿಟ್ಟಿತ್ತು. ಅದೇ ರೀತಿ RWF ಯು ಮೊದಲ ಬ್ಯಾಚ್ ನ ಚಕ್ರ ಮತ್ತು ಎಕ್ಸಲ್ಗಳ ರಪ್ತು ಮಾಡಿದೆ. ಈ ಒಪ್ಪಂದದ ಒಟ್ಟು ಮೊತ್ತ 8.13 ಕೋಟಿ ರೂಪಾಯಿಯಾಗಿದ್ದು, ಒಟ್ಟು 1485 ಉತ್ಪನ್ನಗಳನ್ನು (990 ಚಕ್ರಗಳು ಮತ್ತು 495 ಆಕ್ಸಲ್) ಒಳಗೊಂಡಿದೆ. Railway Wheel Factory , ಯಲಹಂಕ: ಈ ಸಂಸ್ಥೆಯು 1984ರಲ್ಲಿ ಬೆಂಗಳೂರಿನ ಸಮೀಪದ ಯಲಹಂಕದಲ್ಲಿ ಆರಂಭವಾಯಿತು. ಈ ಸಂಸ್ಥೆಯು ಅಕ್ಟೋಬರ್ 21, 2020 ಕ್ಕೆ ಅನ್ವಯಿಸುವಂತೆ ಒಟ್ಟು ನಾಲ್ಕು ದಶಲಕ್ಷ ರೈಲು ಚಕ್ರಗಳನ್ನೂ ತಯಾರಿಸಿದೆ.