Job Description: ತಿರುವನಂತಪುರ: ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ 'ವಾಗಮನ್' ಬೆಟ್ಟ ಪ್ರದೇಶದ ವ್ಯಪ್ತಿಯಲ್ಲಿ ಇದೆ ಮೊದಲ ಬಾರಿಗೆ ಕೇರಳ ರಾಜ್ಯ ಸರ್ಕಾರವು 'ಗ್ರೀನ್ ಚೆಕ್ಪೋಸ್ಟ್'ಗಳಿಗೆ ಚಾಲನೆ ನೀಡಿದೆ. ಗ್ರೀನ್ ಚೆಕ್ಪೋಸ್ಟ್ ಗಳ ಸ್ಥಾಪನೆಯಿಂದ ಸ್ಥಳೀಯ ಪರಿಸವನ್ನು ಕಾಪಾಡುವ ಮುಖ್ಯ ಉದ್ದೇಶ ಹೊಂದಲಾಗಿದೆ. ಹಾಗೂ ಈ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಸಲುವಾಗಿ ವಾಗಮನ್ ಬೆಟ್ಟಕ್ಕೆ ಇರುವ ಒಟ್ಟು ಐದು ಪ್ರವೇಶ ಮಾರ್ಗಗಳಲ್ಲಿ 'ಹರಿತ ಕೇರಳಂ'(ಹಸಿರು ಕೇರಳ) ಯೋಜನೆಯಡಿ 'ಹಸಿರುಸೇನೆ' ಯನ್ನು ಸರ್ಕಾರ ನೇಮಿಸಿದೆ.