Job Description: ಭಾರತ ಹಾಗೂ ಅಮೆರಿಕದ ರಾಷ್ಟ್ರಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರ 2+2 ಸಭೆಯು ಇತ್ತೀಚಿಗೆ ಭಾರತದ ನವದೆಹಲಿಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಈ ಸಭೆಯಲ್ಲಿ ಹಲವು ಮಹತ್ವದ ದ್ವಿಪಕ್ಷೀಯ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರಮುಖವಾಗಿ ರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು. * ಹಿಂದು ಮಹಾಸಾಗರ-ಶಾಂತಸಾಗರ (ಇಂಡೋ-ಪೆಸಿಫಿಕ್) ವಲಯದಲ್ಲಿ ಚೀನಾದ ಪ್ರಾಭಲ್ಯವನ್ನು ಮಟ್ಟ ಹಾಕುವಲ್ಲಿ ಸಭೆಯು ಮಹತ್ವ ಪಡೆದಿದೆ. * ಕಾಯಂ ಸದಸ್ಯತ್ವಕ್ಕೆ ಬೆಂಬಲ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸ್ಥಾನಕ್ಕಾಗಿ ಅಮೆರಿಕದ ಸಂಪೂರ್ಣ ಬೆಂಬಲವನ್ನು ಇದೆ ವೇಳೆ ಅಮೆರಿಕಾದ ಪಾಂಪಿಯೋ ಘೋಷಿಸಿದರು. “2+2 ಮಾತುಕತೆ" ಎಂದರೇನು? ಯಾವುದೇ 2 ರಾಷ್ಟ್ರಗಳ ವಿದೇಶಾಂಗ ಸಚಿವ ಮತ್ತು ರಕ್ಷಣ ಸಚಿವರು ಒಟ್ಟಿಗೇ ಕುಳಿತು ನಡೆಸುವ ಮಾತುಕತೆಯಾಗಿದ್ದು, ವಿದೇಶಾಂಗ ಮಾತುಕತೆಗಳಲ್ಲಿ ಸಾಮಾನ್ಯವಾಗಿ ಈ ಪದ ಬಳಕೆ ಮಾಡಲಾಗುವದು. ಇನ್ನು ಈ ಮಾತುಕತೆಯಲ್ಲಿ ಉಭಯ ದೇಶಗಳ ವ್ಯೂಹಾತ್ಮಕ, ಭದ್ರತೆ, ರಾಜತಾಂತ್ರಿಕ ಸೇರಿ ಹಲವು ವಿಷಯಗಳ ಚರ್ಚೆ ನಡೆಸಲಾಗುವದು. ಯಾರು ಭಾಗವಹಿಸುವವರು ? ಭಾರತದಿಂದ - ಎಸ್.ಜೈಶಂಕರ್ - ವಿದೇಶಾಂಗ ಸಚಿವ ಮತ್ತು ರಾಜನಾಥ್ ಸಿಂಗ್ - ರಕ್ಷಣ ಸಚಿವ ಅಮೆರಿಕದಿಂದ - ಮೈಕ್ ಪೊಂಪ್ಯು- ವಿದೇಶಾಂಗ ಸಚಿವ ಹಾಗೂ ಮಾರ್ಕ್ ಎಸ್ಪರ್- ರಕ್ಷಣ ಸಚಿವ * ಭಾರತ ಮತ್ತು ಅಮೆರಿಕಗಳ ದೇಶಗಳ ಮಧ್ಯ ಮೊದಲು 2018ರ ಸೆಪ್ಟೆಂಬರ್ನಲ್ಲಿ 2+2 ಮಾತುಕತೆಯು ನವದೆಹಲಿಯಲ್ಲಿ ನಡೆದಿತ್ತು. ಇನ್ನು ಪ್ರಸ್ತುತ ನಡೆದಿರುವ ಮಾತುಕತೆಯು ಮೂರನೇ 2+2 ಮಾತುಕತೆಯಾಗಿದೆ.