Job Description: ವಿಕ್ಟೋರಿಯಾ : ದ್ವೀಪಸಮೂಹ ರಾಷ್ಟ್ರವಾದ ಸೆಶೆಲ್ಸ್ನಲ್ಲಿ ಇತ್ತೀಚಿಗೆ ನಡೆದ ಅಧ್ಯಕ್ಷಿಯ ಚುನಾವಣೆಯಲ್ಲಿ ವಾವೆಲ್ ರಾಮ್ಕಾಲವನ್ ಜಯಭೇರಿ ಸಾದಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಮೂಲದವರಾದ ರಾಮ್ಕಲವನ್ ಅವರು ಮೂಲತಃ ಬಿಹಾರದವರು. ಇವರಿಗೆ ಚುನಾವಣೆಯಲ್ಲಿ 54.9 ಶೇಕಡ ಮತಗಳು ದೊರೆತಿದ್ದು, ಹಾಲಿ ಅಧ್ಯಕ್ಷ ಡ್ಯಾನಿ ಫೌರೆ ಅವರಿಗೆ 43.5 ಶೇಕಡ ಮತಗಳು ಲಭ್ಯವಾಗಿವೆ. * ಬ್ರಿಟಿಶ್ ವಸಾಹತು ಪ್ರದೇಶವಾಗಿದ್ದ ಸೆಶಲ್ಸ್ ದ್ವೀಪ ರಾಷ್ಟ್ರವು 1976ರಲ್ಲಿ ಸ್ವತಂತ್ರವಾಗಿತ್ತು.