Job Description: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ಗುಜರಾತ್ ರಾಜ್ಯದಲ್ಲಿ ಕಿಸಾನ್ ಸೂರ್ಯೋದಯ, ಮಕ್ಕಳ ಹೃದ್ರೋಗ ಆಸ್ಪತ್ರೆ, ಗಿರ್ನಾರ್ ರೋಪ್ ವೇ ಸೇರಿ ಹಲವು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಅವರು ಭಾರತವು ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತ ಸಾಗಿದ್ದು, ಪ್ರಸ್ತುತ ಜಗತ್ತಿನಲ್ಲಿ 5ನೇ ಸ್ಥಾನ ಪಡೆದಿಕೊಂಡಿರುವುದಾಗಿ ಅವರು ತಿಳಿಸಿದರು. ರೈತರಿಗೆ ಕಿಸಾನ್ ಸೂರ್ಯೋದಯ ಯೋಜನೆಯಿಂದ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ವಿದ್ಯುತ್ ದೊರಕಿಸಿಕೊಡಲು ಸಹಕಾರಿಯಾಗಲಿದೆ.