Job Description: ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಕೋರೋಣ ಕಾರಣದಿಂದಾಗಿ ಆಚರಿಸಲಾಯಿತು. ಇದೆ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಎಂಬ ಆನೆ ಸಾಗಿತು. ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. * ಇದೆ ವೇಳೆ 21 ಸುತ್ತು ಕುಶಾಲು ತೋಪು ಸಿಡಿಸಲಾಯಿತು. * ಅಂಬಾರಿ ಹೊತ್ತ ಆನೆ ಅಭಿಮನ್ಯು ಜೊತೆ ಕಾವೇರಿ, ವಿಜಯ, ಗೋಪಿ, ವಿಕ್ರಮ ಎಂಬ ಆನೆಗಳು ಅಕ್ಕ ಪಕ್ಕದಲ್ಲಿ ಸಾಗಿದವು. * ಮೆರವಣಿಗೆ ವೇಳೆ ಮಂಗಳವಾದ್ಯ, ಡೋಲು, ಕರ್ನಾಟಕ ಪೊಲೀಸ್ ಬ್ಯಾಂಡ್ ವತಿಯಿಂದ ಆನೆ ಬಂಡಿ ಸ್ತಬ್ಧಚಿತ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊರೊನಾ ಜಾಗೃತಿ ಟ್ಯಾಬ್ಲೊ ಸಾಗಿತು. * ಈ ಬಾರಿ ಜಂಬೂ ಸವಾರಿ ಮೆರವಣಿಗೆ ವೇಳೆ ಕೇವಲ 500 ಕ್ಕೂ ಹೆಚ್ಚು ಜನ ಬಾಗಿಯಾಗಿದ್ದರು.